ನಟಿ ಶ್ರೀದೇವಿ ನಿಧನ : ಅಂತಿಮ ವಿದಾಯ ಹೇಳಲು ಬಂದ ಬಾಲಿವುಡ್ ತಾರಾ ಬಳಗ | Oneindia Kannada

2018-02-28 2,765

After Bollywood actress Sridevi’s sudden demise, a host of celebrities reached to the place where Sridevi's body was kept to say final good bye. Here are few Photos & videos of Actor, actress and others in Sridevi condolence gathering in Mumbai on Wednesday. 54 year old actress Sridevi demised recently in Dubai.

ಲಕ್ಷಾಂತರ, ಕೋಟ್ಯಂತರ ಮಂದಿ ಕಣ್ಣಿಗೆ ಬೆರಗಿನಂತಿದ್ದ ಶ್ರೀದೇವಿ ಎಂಬ ಚೆಲುವೆ ತನ್ನ ನೆನಪನ್ನು ಉಳಿಸಿ ಹೊರಟಿದ್ದಾರೆ. ಮಿನುಗುತ್ತಿದ್ದ ತಾರೆಯೊಂದು ಕಳಾಹೀನವಾಗಿದೆ. ಆ ಕಣ್ಣುಗಳಲ್ಲಿ ತುಳುಕಿಸುತ್ತಿದ್ದ ಭಾವನೆಗಳು, ಅದ್ಭುತವಾದ ನಟನೆ, ಜೇನು ತುಂಬಿಕೊಂಡಂತೆ ಭಾಸವಾಗುತ್ತಿದ್ದ ಧ್ವನಿ ಇವೆಲ್ಲ ಇನ್ನು ಮುಂದೆ ಸಿನಿಮಾಗಳಲ್ಲಿ ಮಾತ್ರ ಕಾಣಲು ಸಿಗುತ್ತದೆ. ಮುಭೈನಲ್ಲಿ ಬುಧವಾರ ಶ್ರೀದೇವಿಯ ಅಂತ್ಯಸಂಸ್ಕಾರ. ಬದುಕಿರುವಾಗ ಅಯಸ್ಕಾಂತದಂತೆ ಸೆಳೆಯುತ್ತಿದ್ದ ಆಕೆಯ ಅಂತಿಮ ದರ್ಶನ ಪಡೆಯುವ ಸಲುವಾಗಿ ಸಾಗರವನು ಅರಸಿ ಸಾಗುವ ನದಿಗಳಂತೆ ಅದೆಷ್ಟೋ ಮಂದಿ ಬರುತ್ತಿದ್ದಾರೆ. ಜತೆಗೆ ಹಿಂದಿ ಚಿತ್ರರಂಗವೂ ಸೇರಿದಂತೆ ವಿವಿಧ ಭಾಷೆಯ ನಟ-ನಟಿಯರು ಸಹ ಧಾವಿಸುತ್ತಿದ್ದಾರೆ.